ಸನಾತನ ಹಿಂದೂ ಪರಂಪರೆಯಲ್ಲಿ ಜಪಕ್ಕೆ ಅತ್ಯಂತ ಮಹತ್ವವಿದೆ. ಭಕ್ತರು ಒಂದೇ ಸಂಕಲ್ಪದಲ್ಲಿ ದೇವರ ನಾಮವನ್ನು ಜಪಿಸಿದಾಗ ಅದು "ಜಪಯಜ್ಞ"ವಾಗಿ ಪರಿವರ್ತನೆಗೊಂಡು ಶಾಂತಿ, ಆರೋಗ್ಯ, ಐಶ್ವರ್ಯ, ಧೈರ್ಯ ಮತ್ತು ಮನಶ್ಶಾಂತಿ ನೀಡುತ್ತದೆ. “ಶ್ರೀ ದುರ್ಗಾಯೈ ನಮಃ” ಜಪವು ನಮ್ಮೊಳಗಿನ ಶೌರ್ಯ–ಭಕ್ತಿ–ಚೈತನ್ಯವನ್ನು ಎಬ್ಬಿಸಿ ರಾಷ್ಟ್ರಚೈತನ್ಯ ಬಲಪಡಿಸುತ್ತದೆ. ಶ್ರೀದುರ್ಗಾಪರಮೇಶ್ವರಿ ಭಾರತಮಾತೆಯ ದಿವ್ಯ ಸ್ವರೂಪ; “ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ” ಎಂದು ಹೇಳುವ ವಂದೇಮಾತರಂ ರಚನೆಯ 150 ವರ್ಷಗಳ ಸಂಭ್ರಮವನ್ನು ಈ ಅಭಿಯಾನವು ವಿಶೇಷವಾಗಿ ಸ್ಮರಿಸುತ್ತದೆ.
“ಶ್ರೀ ದುರ್ಗಾ ಜಪಯಜ್ಞ ಅಭಿಯಾನ–2026” 1 ಡಿಸೆಂಬರ್ 2025ರಿಂದ 31 ಡಿಸೆಂಬರ್ 2025ರವರೆಗೆ ನಡೆಯಲಿದೆ. ದೇಶ-ವಿದೇಶದ ಭಕ್ತರು ಮನೆಯಿಂದಲೇ ಕನಿಷ್ಠ 10 ದಿನ ದಿನಕ್ಕೆ 108 ಬಾರಿ ಜಪ ಮಾಡಿ (ಒಟ್ಟು 1080 ಜಪ) ಅಭಿಯಾನಕ್ಕೆ ಸೇರಬಹುದು. ಸಾವಿರಾರು ಭಕ್ತರ ಜಪಶಕ್ತಿ ಸೇರಿ ಕೋಟಿಗೂ ಹೆಚ್ಚು ಜಪ ದೇಶಾದ್ಯಂತ ಮಾರ್ದನುತ್ತದೆ.
ಪೂರ್ಣಾಹುತಿ 1 ಜನವರಿ 2026 ರಂದು ಬೆಳಿಗ್ಗೆ 10 ಗಂಟೆಗೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಾಲಯದಲ್ಲಿ ‘ಶ್ರೀದುರ್ಗಾ ಹೋಮ’ದೊಂದಿಗೆ ನಡೆಯಲಿದೆ. ಕುಟುಂಬ ಸಮೇತವಾಗಿ ಭಾಗವಹಿಸಿ ತಾಯಿ ದುರ್ಗೆಯ ಕೃಪೆಗೆ ಪಾತ್ರರಾಗಿರಿ.